ವಿಬಂಧ' --ಭೇದಿ ಸರಿಯಾದರೆ ಬಾಧೆ ಇರದು
“ಸಮದೋಷ ಸಮಾಗ್ನಿಶ್ಚ ಸಮಧಾತುಮಲಕ್ರಿಯಾಃ|ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೆ ||”
ಸಮದೋಷ,ಸಮಧಾತು,ಸಮಾಗ್ನಿ, ಸರಳವಾದ ಮಲ ಕ್ರಿಯೆ,ಸಂತೋಷ ಸ್ಥಿತಿಯುಳ್ಳ ಆತ್ಮ ,ಪಂಚೇಂದ್ರಿಯಗಳು
ಮತ್ತು ಮನಸ್ಸು ಇವೆಲ್ಲವು ಸಮತೋಲನ ಸ್ಥಿತಿಯಲ್ಲಿದ್ದರೆ ಮಾತ್ರ ಮಾನವನ ಜೀವನ ಆರೋಗ್ಯಕರವಾಗಿರುತ್ತದೆ ಎಂದು ಆಚಾರ್ಯ ಸುಶ್ರುತರು ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.ಮಲಕ್ರೀಯೆ ಸ್ವಸ್ಥ ಪುರುಷನ ಲಕ್ಷಣ.ಪ್ರತಿದಿನ ಪ್ರಾಕೃತ ಮಲ ವಿಸರ್ಜನೆ ಆರೋಗ್ಯವಂತನ ಲಕ್ಷಣ ಕೂಡಾ ಹೌದು.
**** ಮಲಬದ್ಧತೆಗೆ ಮುಖ್ಯ ಕಾರಣಗಳು --
ನೀರು ಕಡಿಮೆ ಕುಡಿಯುವುದು,ಅನಿದ್ರೆ,ಒತ್ತಡದ ಬದುಕು, ಕುರುಕುಲು ತಿಂಡಿ ತಿನಿಸು ಮತ್ತು ಮೈದಾ ಹಿಟ್ಟಿನಿಂದ ಮಾಡಿದ ಆಹಾರದ ಆಯ್ಕೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ನಾವು ತಿನ್ನುವ ಆಹಾರ ಮತ್ತು ಕುಡಿಯುವ ಪೇಯಗಳು ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ವೇಗದ ಜೀವನದಿಂದಾಗಿ, ದಿನವಿಡೀ ದ್ರವ ಪದಾರ್ಥ ಸೇವಿಸಲು ನಮಗೆ ಸಾಕಷ್ಟು ಸಮಯ ಸಿಗುವುದಿಲ್ಲ, ಮತ್ತು ನಾವು ಪ್ರತಿದಿನವೂ ಜಂಕ್ ಫುಡ್ ತಿಂದು ಆ ದಿನ ಮುಗಿಸುತ್ತೇವೆ.
ಒಟ್ಟಿನಲ್ಲಿ ನಮ್ಮ ಜೀವನ ವಿಧಾನ, ಆಹಾರವನ್ನು ತೆಗೆದುಕೊಳ್ಳುವ ರೀತಿ, ಅನೈಸರ್ಗಿಕ ಆಹಾರಕ್ರಮ, ಮೊದಲಾದ ಕಾರಣಗಳಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗದೇ ಅಜೀರ್ಣಕ್ಕೇ ಎಡೆಮಾಡುತ್ತದೆ
ಇವೆಲ್ಲವುಗಳಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಹಾಳುಗುತ್ತದೆ. ಕೆಟ್ಟ ಜೀರ್ಣಾಂಗ ವ್ಯವಸ್ಥೆಯಿಂದ ಸ್ವಾಸ್ಥ್ಯ ದುಸ್ಥರಗೊಳ್ಳುತ್ತದೆ.ಇಂಥಹ ಸಂದರ್ಭದಲ್ಲಿ ಜೀರ್ಣಾಂಗ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಮೊಟ್ಟಮೊದಲಿಗೆ ಪ್ರತಿಯೊಬ್ಬರೂ ಎದುರಿಸುತ್ತಿರುವ ಒಂದು ಸಮಸ್ಯೆಯೇ ಮಲಬದ್ಧತೆ.
***(ಲಕ್ಷಣ ಮತ್ತು ಉಪದ್ರವ ---
ಮಲಬದ್ಧತೆಯು ಹೊಟ್ಟೆಯ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ಇದು ಹೊಟ್ಟೆಯಲ್ಲಿ ಜೀರ್ಣಕಾರಿ
ಸಮಸ್ಯೆಗಳನ್ನುಸೃಷ್ಟಿಸುತ್ತದೆ.ಇದರಿಂ ದಅಗ್ನಿಮಾಂದ್ಯ,ಆಮ,ಅಜೀರ್ಣ,ಆದ್ಮಾನ, ಅನಾಹ,ಆಟೋಪ,ಉದರಶೂಲ,
ಉದ್ಗಾರ,ಪರಿಕರ್ತಿಕಾ,ಅರ್ಶ, ಮತ್ತು ಉದಾವರ್ತ, ಹೃದ್ರೋಗದಂತಹ ಹಾಗೂ ಇನ್ನಿತರ ಹಲವಾರು ತೊಂದರೆದಾಯಕಕಾಯಿಲೆಗಳಿಗೆನಾಂದಿಯಾಗು ವುದಲ್ಲದೇ ರೋಗ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಇದರಿಂದ ಅನೇಕ ಮೇಲಿನ ರೋಗಗಳು ತಗಲುವುದಲ್ಲದೇ ಮನೋಶಾರೀರಿಕ ಆರೋಗ್ಯದಲ್ಲಿ ವೈಪರಿತ್ಯ ಕಾಣಿಸಿ ಕೊಳ್ಳತ್ತದೆ.
***ಚಿಕಿತ್ಸೆ ಮತ್ತು ಪರಿಹಾರೋಪಾಯ --
ಮಲಬದ್ಧತೆ ಸರ್ವೇಸಾಮಾನ್ಯ ಸರ್ವರಿಗೂ ಹಿರಿಯರು, ವಯಸ್ಕರು, ಗರ್ಭಿಣಿ ಮತ್ತು ಚಿಕ್ಕಮಕ್ಕಳಲ್ಲಿ ಕಾಡುವ ರೋಗವಾಗಿದೆ.ಆಯುರ್ವೇದ ದಲ್ಲಿ ಮಲಬದ್ಧತೆಗೆ ಅನೇಕ ಚಿಕಿತ್ಸಾ ಮಾರ್ಗೋಪಾಯ, ಪರಿಹಾರ ಪಥ್ಯ ಅಪಥ್ಯ ಗಳನ್ನು ವಿಶ್ಲೇಷಿಸಿದ್ದಾರೆ.ಅದರಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.
ತ್ರಿಫಲಾ ಚೂರ್ಣ, ಅವಿಪತ್ತಿಕರ ಚೂರ್ಣ,ತ್ರಿಕಟುಚೂರ್ಣ ಹಾಗೂಎರಂಡತೈಲ,ತ್ರಿವೃತ್ಲೇಹ್ಯ,ಅಭಯಾ ದಿಮೋದಕ,
ಇಚ್ಛಾ ಬೇಧಿ ರಸವೆಂಬ ಪ್ರಮುಖ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ದೋಷ-ದುಷ್ಯಾ,ಪ್ರಕೃತಿ ಯನುಸಾರ ಚಿಕಿತ್ಸೆ ಕೊಡಲಾಗುವುದು
1. ಜೀವನಶೈಲಿ ಅಂಶಗಳು ಮತ್ತು ಆಹಾರ ಪದ್ಧತಿಯಲ್ಲಿ ಆರೋಗ್ಯಕ್ಕನುಗುಣವಾಗಿ ವ್ಯತ್ಯಾಸ ಮಾಡಿತೊಳ್ಳುವುದು.
2. ಕೆಲವು ರೀತಿಯ ಔಷಧಿಗಳಿಂದಲೂ ಮಲಬದ್ಧತೆ ಕಾಣುತ್ತದೆ ಕಾರಣ ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುತ್ತಿದ್ದರೆ ಮಲಬದ್ಧತೆಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚು. ಕಾರಣ ವೈದ್ಯನನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಯೋಗ್ಯ.
3. ಫೈಬರ್ ಯುಕ್ತ (ನಾರಿನಂಶ)ಇರುವ ಆಹಾರ ಸೇವನೆ
ತರಕಾರಿಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ಧಾನ್ಯದ ಉತ್ಪನ್ನಗಳು ಸೇರಿದಂತೆ ನಿಮ್ಮ ಆಹಾರಕ್ರಮದಲ್ಲಿ ಬಹಳಷ್ಟು ಆಹಾರದ ಬಳಕೆ.
4. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು
5. ನಿಯಮಿತ ಸತ್ವಯುಕ್ತ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮತ್ತು ಆಧುನಿಕ ಆಹಾರ ವಿಹಾರ ಶೈಲಿಯನ್ನು ತ್ಯಜಿಸುವುದು.
6. ಊಟದಲ್ಲಿ ಅತಿಯಾದ ಸೊಪ್ಪು ತರಕಾರಿ ಹಾಲು ಮತ್ತು ಮಜ್ಜಿಗೆ ಹಾಗೂ ಹಣ್ಣು ಸೇವನೆ ಒಳ್ಳೆಯದು
7. ಮಲಬದ್ಧತೆ ಇದ್ದರೆ ಬೆಳಿಗ್ಗೆ ಅಥವಾ ಸಾಯಂಕಾಲ ಉಷ್ಣ ಜಲಪಾನ ಒಳ್ಳೆಯದು.
8. ಒತ್ತಡದ ಬದುಕು, ಆಹಾರ ಪದ್ಧತಿ ಸೇವನೆಯಲ್ಲಿ ವೈಪರಿತ್ಯ ಮೂಲ ಕಾರಣವಾಗಿದ್ದು ಇದನ್ನು ಸರಿಪಡಿಸಿ ಕೊಳ್ಳವುದು ಉತ್ತಮ.
ಹೀಗೆಯೇ ವಿವಿಧ ರೋಗಗಳು ಮತ್ತು ಪರಿಸ್ಥಿತಿಗಳು ಮಲಬದ್ಧತೆಯ ಬೆಳವಣಿಗೆಗೆ ಕಾರಣವಾಗಬಹುದು. ನರಮಂಡಲದ ಮೇಲೆ ಪ್ರಭಾವ ಬೀರುವ ರೋಗಗಳು ಅಂತಃಸ್ರಾವಕ ವ್ಯವಸ್ಥೆ ಮತ್ತು ಜೀರ್ಣಾಂಗದ ಅವ್ಯವಸ್ಥೆ ಮಲಬದ್ಧತೆಗೆ ಕಾರಣವಾಗಬಹುದು. ಕೆಲವೊಮ್ಮೆ ಮಲಬದ್ಧತೆ ಇದು ಸಂಬಂಧವಿಲ್ಲದ ಸಮಸ್ಯೆ ಎಂದು ತೋರುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ, ದೊಡ್ಡ ಕರುಳಿನೊಂದಿಗೆ ತೋರಿಕೆಯಲ್ಲಿ ಏನೂ ಇಲ್ಲದಿರುವ ತೀವ್ರ ಸ್ಥಿತಿಯ ರೋಗಕ್ಕೆ ಮರಳಬಹುದು.
ಆಯುರ್ವೇದ ದಲ್ಲಿ ಮಲಬದ್ಧತೆ ಕಾಯಿಲೆಯ ಬಗ್ಗೆ ವಿಶೇಷವಾದ ವಿಚಾರ ವಿಮರ್ಶೆ ವಿಶ್ಲೇಷಣೆಗಳು ಉಲ್ಲೇಖಿತವಿದ್ದು ವಿಶಿಷ್ಟವಾದ ಚಿಕಿತ್ಸೆಗಳ ಬಗ್ಗೆಯೂ ವಿವರಣೆ ಇದೆ.ಇನ್ನು ವಿಬಂಧ ಅಥವಾ ಮಲಬಂಧ,ಮಲಬದ್ಧತೆ ವಿವಿಧ ರೀತಿಯಲ್ಲಿ ಉಲ್ಲೇಖಿಸಿ ವಿವರಿಸಿದ್ದಾರೆ.ಒಟ್ಟಾರೆ ವಿಬಂಧ ಅಥವಾ ಮಲಬದ್ಧತೆ ಕಾಯಿಲೆ ಅಲ್ಪವಿದ್ದಾಗಲೇ ಚಿಕಿತ್ಸಿಸಿ ಕೊಳ್ಳುವುದು ಒಳ್ಳೆಯದು. ತೀವ್ರಗತಿಯಿಂದ ದುಷ್ಪರಿಣಾಮಗಳಲ್ಲದೇ
ಅನೇಕ ತೀವ್ರ ತರಹದ ರೋಗ ಉತ್ಪನ್ನವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ll" ದೋಷ ಧಾತು ಮಲ ಮೂಲಂ ಹಿ ಶರೀರಂ." ll
ಮತ್ತು ಮನಸ್ಸು ಇವೆಲ್ಲವು ಸಮತೋಲನ ಸ್ಥಿತಿಯಲ್ಲಿದ್ದರೆ ಮಾತ್ರ ಮಾನವನ ಜೀವನ ಆರೋಗ್ಯಕರವಾಗಿರುತ್ತದೆ ಎಂದು ಆಚಾರ್ಯ ಸುಶ್ರುತರು ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.ಮಲಕ್ರೀಯೆ ಸ್ವಸ್ಥ ಪುರುಷನ ಲಕ್ಷಣ.ಪ್ರತಿದಿನ ಪ್ರಾಕೃತ ಮಲ ವಿಸರ್ಜನೆ ಆರೋಗ್ಯವಂತನ ಲಕ್ಷಣ ಕೂಡಾ ಹೌದು.
**** ಮಲಬದ್ಧತೆಗೆ ಮುಖ್ಯ ಕಾರಣಗಳು --
ನೀರು ಕಡಿಮೆ ಕುಡಿಯುವುದು,ಅನಿದ್ರೆ,ಒತ್ತಡದ ಬದುಕು, ಕುರುಕುಲು ತಿಂಡಿ ತಿನಿಸು ಮತ್ತು ಮೈದಾ ಹಿಟ್ಟಿನಿಂದ ಮಾಡಿದ ಆಹಾರದ ಆಯ್ಕೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ನಾವು ತಿನ್ನುವ ಆಹಾರ ಮತ್ತು ಕುಡಿಯುವ ಪೇಯಗಳು ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ವೇಗದ ಜೀವನದಿಂದಾಗಿ, ದಿನವಿಡೀ ದ್ರವ ಪದಾರ್ಥ ಸೇವಿಸಲು ನಮಗೆ ಸಾಕಷ್ಟು ಸಮಯ ಸಿಗುವುದಿಲ್ಲ, ಮತ್ತು ನಾವು ಪ್ರತಿದಿನವೂ ಜಂಕ್ ಫುಡ್ ತಿಂದು ಆ ದಿನ ಮುಗಿಸುತ್ತೇವೆ.
ಒಟ್ಟಿನಲ್ಲಿ ನಮ್ಮ ಜೀವನ ವಿಧಾನ, ಆಹಾರವನ್ನು ತೆಗೆದುಕೊಳ್ಳುವ ರೀತಿ, ಅನೈಸರ್ಗಿಕ ಆಹಾರಕ್ರಮ, ಮೊದಲಾದ ಕಾರಣಗಳಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗದೇ ಅಜೀರ್ಣಕ್ಕೇ ಎಡೆಮಾಡುತ್ತದೆ
ಇವೆಲ್ಲವುಗಳಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಹಾಳುಗುತ್ತದೆ. ಕೆಟ್ಟ ಜೀರ್ಣಾಂಗ ವ್ಯವಸ್ಥೆಯಿಂದ ಸ್ವಾಸ್ಥ್ಯ ದುಸ್ಥರಗೊಳ್ಳುತ್ತದೆ.ಇಂಥಹ ಸಂದರ್ಭದಲ್ಲಿ ಜೀರ್ಣಾಂಗ ವ್ಯವಸ್ಥೆಯ ಬಗ್ಗೆ ಮಾತನಾಡುವಾಗ ಮೊಟ್ಟಮೊದಲಿಗೆ ಪ್ರತಿಯೊಬ್ಬರೂ ಎದುರಿಸುತ್ತಿರುವ ಒಂದು ಸಮಸ್ಯೆಯೇ ಮಲಬದ್ಧತೆ.
***(ಲಕ್ಷಣ ಮತ್ತು ಉಪದ್ರವ ---
ಮಲಬದ್ಧತೆಯು ಹೊಟ್ಟೆಯ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ಇದು ಹೊಟ್ಟೆಯಲ್ಲಿ ಜೀರ್ಣಕಾರಿ
ಸಮಸ್ಯೆಗಳನ್ನುಸೃಷ್ಟಿಸುತ್ತದೆ.ಇದರಿಂ
ಉದ್ಗಾರ,ಪರಿಕರ್ತಿಕಾ,ಅರ್ಶ, ಮತ್ತು ಉದಾವರ್ತ, ಹೃದ್ರೋಗದಂತಹ ಹಾಗೂ ಇನ್ನಿತರ ಹಲವಾರು ತೊಂದರೆದಾಯಕಕಾಯಿಲೆಗಳಿಗೆನಾಂದಿಯಾಗು
***ಚಿಕಿತ್ಸೆ ಮತ್ತು ಪರಿಹಾರೋಪಾಯ --
ಮಲಬದ್ಧತೆ ಸರ್ವೇಸಾಮಾನ್ಯ ಸರ್ವರಿಗೂ ಹಿರಿಯರು, ವಯಸ್ಕರು, ಗರ್ಭಿಣಿ ಮತ್ತು ಚಿಕ್ಕಮಕ್ಕಳಲ್ಲಿ ಕಾಡುವ ರೋಗವಾಗಿದೆ.ಆಯುರ್ವೇದ ದಲ್ಲಿ ಮಲಬದ್ಧತೆಗೆ ಅನೇಕ ಚಿಕಿತ್ಸಾ ಮಾರ್ಗೋಪಾಯ, ಪರಿಹಾರ ಪಥ್ಯ ಅಪಥ್ಯ ಗಳನ್ನು ವಿಶ್ಲೇಷಿಸಿದ್ದಾರೆ.ಅದರಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.
ತ್ರಿಫಲಾ ಚೂರ್ಣ, ಅವಿಪತ್ತಿಕರ ಚೂರ್ಣ,ತ್ರಿಕಟುಚೂರ್ಣ ಹಾಗೂಎರಂಡತೈಲ,ತ್ರಿವೃತ್ಲೇಹ್ಯ,ಅಭಯಾ
ಇಚ್ಛಾ ಬೇಧಿ ರಸವೆಂಬ ಪ್ರಮುಖ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ದೋಷ-ದುಷ್ಯಾ,ಪ್ರಕೃತಿ ಯನುಸಾರ ಚಿಕಿತ್ಸೆ ಕೊಡಲಾಗುವುದು
1. ಜೀವನಶೈಲಿ ಅಂಶಗಳು ಮತ್ತು ಆಹಾರ ಪದ್ಧತಿಯಲ್ಲಿ ಆರೋಗ್ಯಕ್ಕನುಗುಣವಾಗಿ ವ್ಯತ್ಯಾಸ ಮಾಡಿತೊಳ್ಳುವುದು.
2. ಕೆಲವು ರೀತಿಯ ಔಷಧಿಗಳಿಂದಲೂ ಮಲಬದ್ಧತೆ ಕಾಣುತ್ತದೆ ಕಾರಣ ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುತ್ತಿದ್ದರೆ ಮಲಬದ್ಧತೆಯನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚು. ಕಾರಣ ವೈದ್ಯನನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಯೋಗ್ಯ.
3. ಫೈಬರ್ ಯುಕ್ತ (ನಾರಿನಂಶ)ಇರುವ ಆಹಾರ ಸೇವನೆ
ತರಕಾರಿಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಮತ್ತು ಧಾನ್ಯದ ಉತ್ಪನ್ನಗಳು ಸೇರಿದಂತೆ ನಿಮ್ಮ ಆಹಾರಕ್ರಮದಲ್ಲಿ ಬಹಳಷ್ಟು ಆಹಾರದ ಬಳಕೆ.
4. ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು
5. ನಿಯಮಿತ ಸತ್ವಯುಕ್ತ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮತ್ತು ಆಧುನಿಕ ಆಹಾರ ವಿಹಾರ ಶೈಲಿಯನ್ನು ತ್ಯಜಿಸುವುದು.
6. ಊಟದಲ್ಲಿ ಅತಿಯಾದ ಸೊಪ್ಪು ತರಕಾರಿ ಹಾಲು ಮತ್ತು ಮಜ್ಜಿಗೆ ಹಾಗೂ ಹಣ್ಣು ಸೇವನೆ ಒಳ್ಳೆಯದು
7. ಮಲಬದ್ಧತೆ ಇದ್ದರೆ ಬೆಳಿಗ್ಗೆ ಅಥವಾ ಸಾಯಂಕಾಲ ಉಷ್ಣ ಜಲಪಾನ ಒಳ್ಳೆಯದು.
8. ಒತ್ತಡದ ಬದುಕು, ಆಹಾರ ಪದ್ಧತಿ ಸೇವನೆಯಲ್ಲಿ ವೈಪರಿತ್ಯ ಮೂಲ ಕಾರಣವಾಗಿದ್ದು ಇದನ್ನು ಸರಿಪಡಿಸಿ ಕೊಳ್ಳವುದು ಉತ್ತಮ.
ಹೀಗೆಯೇ ವಿವಿಧ ರೋಗಗಳು ಮತ್ತು ಪರಿಸ್ಥಿತಿಗಳು ಮಲಬದ್ಧತೆಯ ಬೆಳವಣಿಗೆಗೆ ಕಾರಣವಾಗಬಹುದು. ನರಮಂಡಲದ ಮೇಲೆ ಪ್ರಭಾವ ಬೀರುವ ರೋಗಗಳು ಅಂತಃಸ್ರಾವಕ ವ್ಯವಸ್ಥೆ ಮತ್ತು ಜೀರ್ಣಾಂಗದ ಅವ್ಯವಸ್ಥೆ ಮಲಬದ್ಧತೆಗೆ ಕಾರಣವಾಗಬಹುದು. ಕೆಲವೊಮ್ಮೆ ಮಲಬದ್ಧತೆ ಇದು ಸಂಬಂಧವಿಲ್ಲದ ಸಮಸ್ಯೆ ಎಂದು ತೋರುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ, ದೊಡ್ಡ ಕರುಳಿನೊಂದಿಗೆ ತೋರಿಕೆಯಲ್ಲಿ ಏನೂ ಇಲ್ಲದಿರುವ ತೀವ್ರ ಸ್ಥಿತಿಯ ರೋಗಕ್ಕೆ ಮರಳಬಹುದು.
ಆಯುರ್ವೇದ ದಲ್ಲಿ ಮಲಬದ್ಧತೆ ಕಾಯಿಲೆಯ ಬಗ್ಗೆ ವಿಶೇಷವಾದ ವಿಚಾರ ವಿಮರ್ಶೆ ವಿಶ್ಲೇಷಣೆಗಳು ಉಲ್ಲೇಖಿತವಿದ್ದು ವಿಶಿಷ್ಟವಾದ ಚಿಕಿತ್ಸೆಗಳ ಬಗ್ಗೆಯೂ ವಿವರಣೆ ಇದೆ.ಇನ್ನು ವಿಬಂಧ ಅಥವಾ ಮಲಬಂಧ,ಮಲಬದ್ಧತೆ ವಿವಿಧ ರೀತಿಯಲ್ಲಿ ಉಲ್ಲೇಖಿಸಿ ವಿವರಿಸಿದ್ದಾರೆ.ಒಟ್ಟಾರೆ ವಿಬಂಧ ಅಥವಾ ಮಲಬದ್ಧತೆ ಕಾಯಿಲೆ ಅಲ್ಪವಿದ್ದಾಗಲೇ ಚಿಕಿತ್ಸಿಸಿ ಕೊಳ್ಳುವುದು ಒಳ್ಳೆಯದು. ತೀವ್ರಗತಿಯಿಂದ ದುಷ್ಪರಿಣಾಮಗಳಲ್ಲದೇ
ಅನೇಕ ತೀವ್ರ ತರಹದ ರೋಗ ಉತ್ಪನ್ನವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ll" ದೋಷ ಧಾತು ಮಲ ಮೂಲಂ ಹಿ ಶರೀರಂ." ll
ಯಿಂದ ..
ಡಾ.ಸಂಗಮೇಶ್ವರ. ಎನ್. ದೊಡ್ಡಗೌಡ್ರ
ಎಂ.ಡಿ.(ಆಯು)
ಸಹ ಪ್ರಾಧ್ಯಾಪಕರು
ಎಸ್ .ಎಸ್ .ಆಯುರ್ವೇದ ಮಹಾವಿದ್ಯಾಲಯ
ಹಾವೇರಿ. 581110
ಸಹ ಪ್ರಾಧ್ಯಾಪಕರು
ಎಸ್ .ಎಸ್ .ಆಯುರ್ವೇದ ಮಹಾವಿದ್ಯಾಲಯ
ಹಾವೇರಿ. 581110
Comments
Post a Comment