"ದೂರವಾದವೇಕೆ ಈ ಧೂಪನ ಧೂಪ ಧೂಮಪಾನ ? "

 ಪ್ರತಿದಿನ ನಮ್ಮನ್ಯಾಗ ನಮ್ಮವ್ವ ಮುಂಜಾನೆ ಸಂಜೆ ಹೊತ್ತಿಗೆ ಎಲ್ರನೂ ಬೈಯುತ್ತ ಆಕಳು ಹಿಂಡುವ ಹೊತ್ತಿಗೆ  ಲೋಬಾನ ಹಾಕುತ್ತಿದ್ದಳು ಮನಿತುಂಬಾ ಸುವಾಸನೆ  ದೃಷ್ಟಿ,ದುಷ್ಟಶಕ್ತಿ,ಕೆಟ್ಟ ಜೀವ ಕೋಶಗಳ ನಾಶ (ಸೊಳ್ಳೆ, ನೊರಜು ಇತ್ಯಾದಿ)ದೂರವಾಗೊದಲ್ಲದೆ ನಾಶ ಆಗುತ್ತದೆ, ಎನ್ನುವುದು ಬಲವಾದ ನಂಬಿಕೆ. ನಂತರ ಇದರ ಮಹತ್ವ, ನಂಬಿಕೆ, ವೈಜ್ಞಾನಿಕ ಕಾರಣ ಕೂಡಾ ಬರ ಬರುತ್ತಾ ಗೊತ್ತೂ ಆಯ್ತ.

   ಇದು ಪಾರಂಪರಿಕವಾಗಿ ನಡೆದುಕೊಂಡ ಪದ್ಧತಿಯೂ ಹೌದು ಯಾಕಂದರ ಇಪ್ಪತ್ತು ವರ್ಷದ ಹಿಂದಿನ ವಿಚಾರ ನಮ್ಮ ಹಳ್ಳಿಯೊಳಗಿಂದ ತೆಗೆದುಕೊಂಡರ,ಧಾರ್ಮಿಕತೆ,
ದೈವತ್ವದರಿವು ಪೂಜೆ, ಎಲ್ಲರಿಗೂ ನೆನಪಾಗಬಹುದು
     ಹಳ್ಳಿ ರಸ್ತೆಯಲ್ಲಿ ನಡಕೊಂಡು ಹೊಗಮುಂದ       ಮನ್ಯಾಗಿಂದ ಲೋಬಾನ,ಕರ್ಪೂರ,ಧೂಪದ ಸುವಾಸನೆ ಜೊತೆಗೆ ಮಂತ್ರ,ವಚನ ಪೂಜೆ ಪುನಸ್ಕಾರದ ಘಂಟಾನಾದ ಶಬ್ದ ರೋಡಿನಲ್ಲಿ ಓಡಾಡುವವರಿಗೂ ಕಿವಿಗೆ ಕೇಳುತ್ತಾ ಇತ್ತು    ಆದರೆ ಈಗ ಈ ಎಲ್ಲ ಪದ್ಧತಿಗಳು ಹೊಗಿಯೇ ಬಿಟ್ಟಿವೆ
     ನಮ್ಮ ಹಿಂದಿನ ಹಿರಿಯರು ತುಂಬಾ ಬುದ್ಧಿವಂತರು ಅಷ್ಟೇ ವೈಜ್ಞಾನಿಕ ಮತ್ತು ವೈಚಾರಿಕ ಹಾಗೂ ಧಾರ್ಮಿಕ ಆಚರಣೆಗಳ ಜೊತೆ ಜೊತೆಗೆ ಧಾರ್ಮಿಕ ಆಚರಣೆಗಳನ್ನು ಮೈಗೂಡಿಸಿಕೊಂಡು ತಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳುವಂತಹ ಹಲವಾರು ಇಂತಹ ವಿಧಿ ವಿಧಾನಗಳನ್ನು ಅಳವಡಿಸಿಕೊಂಡು,ತಮ್ಮ ಜೀವನವನ್ನು ಸುಖಿಯಾಗಿ ಸಾಗಿಸುತ್ತಿದ್ದರು.ಅದಕ್ಕೆ ಅವರು ಪ್ಲೂ ಇನ್ಪೂಯೆಂಜಾ,ಪ್ಲೇಗನಂತಹ ಹಾಗೂ ರಾಜಯಕ್ಷ್ಮ ಗಳಂತಹ ಮತ್ತು ವೈರಸ್,ಬ್ಯಾಕ್ಟೀರಿಯಾ,ಹಾಗೂ ಇನ್ನಿತರ ಯಾವುದೇ  ಮಾರಕ ಕಾಯಿಲೆಗಳು ಬಂದರೂ ನೂರು ವರ್ಷಗಳ ಕಾಲ ಜೂಂ ಎನ್ನದೆ ಬಾಳಿ ಬದುಕಿದ್ದರು.
ಹೌದು ಈ ಎಲ್ಲ ವಿಷಯಗಳ ಬಗ್ಗೆ ಬರೆಯಲು
ಕಾರಣವೆನೆಂದರೆ
    ಪ್ರಸಕ್ತ ಈ ವೈರಸ್ ಹಾಗೂ ಇನ್ನಿತರ ಹಲವಾರು  ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅನೇಕ ವಿಧಿ ವಿಚಾರ ಚಿಕಿತ್ಸಾ ಕ್ರಮಗಳ ಬಗ್ಗೆ ಆಯುರ್ವೇದದಲ್ಲಿ ಸುಮಾರು ಐದು ಸಾವಿರ ವರ್ಷಗಳ ಮೊದಲೇ ಉಲ್ಲೇಖಿಸಿದ್ದಾರೆ ಅದಕ್ಕೆ ಹತ್ತಾರು ವೈಜ್ಞಾನಿಕ ಸಂಶೋಧನೆಗಳು ಕೂಡಾ ನಡೆದಿದ್ದು ಈ ಧೂಮಪಾನ ಅಥವಾ ಧೂಪ,ಧೂಮಗಳ ಬಗ್ಗೆ ವಿಶೇಷ ವಿಚಾರಗಳ ಬಗ್ಗೆ  ಆಯುರ್ವೇದದಲ್ಲಿ ಸ್ವಾಸ್ಥ್ಯ ಸಂರಕ್ಷಣೆಗೋಸ್ಕರವಾಗಿಯೇ  
"ಚರಕ ಸಂಹಿತೆ, ಸುಶ್ರುತ ಸಂಹಿತೆ ಮತ್ತು ಅಷ್ಟಾಂಗ ಸಂಗ್ರಹ"ದಲ್ಲಿ ಉಲ್ಲೇಖಿಸಿದ್ದಾರೆ.
      ಅದಲ್ಲದೆ ಪ್ರಸಕ್ತ ಸಮಯದಲ್ಲಿ ಕಾಯಿಲೆಗಳಿಂದ  ದೂರವಾಗಲು ಈ ಧೂಪನ ಕರ್ಮದಿಂದ  ಆರೋಗ್ಯದ ಹಿತ ಕಾಪಾಡುವ  ದೃಷ್ಟಿಯಿಂದ ರೂಢಿಸಿಕೊಳ್ಳುವುದು ಒಳಿತು ಅದಲ್ಲದೆ ಅಗ್ನಿಹೊತ್ರ ಹೊಮವೂ ಕೂಡಾ ಇದೇ ಒಂದು ಸಿದ್ಧಾಂತದ ಅಡಿಯ ಮೇಲೆ ಇದೆ ಎಂದರೆ ತಪ್ಪಾಗಲಾರದು.

Comments