"ಸಿಂದಗಿಮಠ ನೆನೆದು"
ಶಿರಬಾಗಿ ನಮನ ಶ್ರೀ ಗುರುವೆ ಕೃಪೆಯಿರಲಿ ಸದಾ ಸಿಂದಗಿಯ ಮಠದ ಶ್ರೀ ಗುರುವೆ
ತಾವಂದು ನೆಟ್ಟು ನೀರುಣಿಸಿ ಬೆಳೆಸಿದಾ ಸಸಿಯು
ಹೆಮ್ಮರವಾಗಿಹುದಿಂದು
ನೆರಳ ನೀಡುತಲಿಹುದು ಇಲ್ಲಿ
ಅನ್ನ ಅಕ್ಷರದಿ ನಿತ್ಯ ದಾಸೋಹದಿ
ಸದಾ ಸವಿರತ ಸೇವೆಗೈಯುತಿಹರು ಕಾಯಕಯೋಗಿ ಶ್ರೀಶಿವಬಸವಯ್ಯನವರು
ನಾನು ಆಯುರ್ವೇದ ವೈದ್ಯ ಡಾ.ಸಂಗಮೇಶ.ನಾ.ದೊಡ್ಡಗೌಡ್ರ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದವನು.ನನ್ನ ಆಯುರ್ವೇದ ವೈದ್ಯಕೀಯ ಪದವಿಯನ್ನು ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಮುಗಿಸಿದೆ.ನಂತರ ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಅವತರಿಸಿ ಹೆಜ್ಜೆಯಿಟ್ಟು ತಪವಗೈದ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಮತ್ತು ನನ್ನ ಸ್ವಂತ ಊರಿನಲ್ಲಿಯೇ ನಾನು ಆಸ್ಪತ್ರೆ ಇಟ್ಟುಕೊಂಡು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು ಈ ವರ್ಷಕ್ಕೆ ಸುಮಾರು ಇಪ್ಪತ್ತೈದು ವರ್ಷಗಳ ಕಳೆಯುತ್ತವೆ.ಶ್ರೀ ಗಳ ಕೃಪಾಶಿರ್ವಾದಿಂದ ನನ್ನ ವೈದ್ಯವೃತ್ತಿಯ ಸೇವೆ ಸಫಲತೆಯತ್ತ ಸಾಗುತ್ತಲೇ ಇದೆ.ಅದಲ್ಲದೆ ಈಗ ಐದು ವರ್ಷಗಳಿಂದ ಶ್ರೀ ಗುರುಗಳ ಶುಭಾಶಿರ್ವಾದದಿಂದ ಸ್ನಾತಕೋತ್ತರ ಪದವಿ ಮುಗಿಸಿ ಮತ್ತೆ ಸಹ ಪ್ರಾಧ್ಯಾಪಕನಾಗಿ ನಾ ಓದಿದ ಅದೇ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವೆ.
"ಭವ,ಭಯ ರೋಗ ಹರಣವು ಶ್ರೀ ಗುರುವಿಂದ"ಎಂದು ಬರೀ ಶಬ್ದಗಳಲ್ಲಿಯಲ್ಲದೇ ಪ್ರತಿನಿತ್ಯ ನಾನು ಚಿಕಿತ್ಸಿಸುವ ನನ್ನ ರೋಗಿಗಳಲ್ಲಿ ಸಿಂದಗಿ ಶಾಂತವೀರೇಶ್ವರ ಆಯುರ್ವೇದ
ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಕಂಡು ಕೇಳುತ್ತಿರುವುದೇ ಇದಕ್ಕೆ ಸಾಕ್ಷಿ. ಶ್ರೀಗಳನು ಸ್ಮರಿಸಿ ನೀಡಿದ ಔಷಧಿಯು ಸಂಜೀವಿನಿಯಂತೆ ವ್ಯಾಧಿಹರಣವಾಗಿ ಪ್ರತಿ ದಿನ ಹಲವಾರು ರೋಗ ರೋಗಿಗಳಲ್ಲಿ ಕಾಣುತ್ತಿದ್ದೇನೆ.
ಸದೃಢ ಸಮಾಜಕ್ಕೆ ಆರೋಗ್ಯ,ಅರಿವು,ಆಚಾರ, ವಿಚಾರಗಳು ಬಹುಮುಖ್ಯವೆಂದು ಅರಿತ ಶ್ರೀಗಳು ಆಚಾರದಿಂದಲೇ ಆರೋಗ್ಯವೆಂದು ಹೇಳಿದ್ದರು ಅನಿಸುತ್ತದೆ.ಮಠಮಾನ್ಯಗಳಲ್ಲಿ ಬರೀ ಪೂಜೆ ಹೋಮ ಹವನಗಳಿಲ್ಲ,ಸದ್ವಿಚಾರ ಸದಾಚಾರಗಳಲ್ಲಿಯೂ ಆಯುರಾರೋಗ್ಯ ಅಡಗಿದೆಯೆಂದು ತೋರಿಸಿ ಭಕ್ತರ ಮನೆಮನದಲ್ಲಿ ಭವ ಭಯ ರೋಗ ಹರಣ ಮಾಡಿದವರು ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು.ಆಡಂಬರದ ಪೂಜೆ ಆಚರಣೆಯನ್ನು ಎಂದೂ ಶ್ರೀಗಳು ಹೇಳುತ್ತಿರಲಿಲ್ಲ ಮನದೊಳಗಿನ ಮಂಕು ದೂರವಾಗಿಸಿದ ಸದೃಢ ಮನೋಧೈರ್ಯ ತುಂಬಿ ಅನೇಕ ಜನರ ಬಾಳಿಗೆ ಬೆಳಕನಿಟ್ಟವರು. ಶ್ರೀ.ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರುತಪೋನಿಷ್ಠರು,ಯೋಗ ಪ್ರವೀಣ ಪಾಂಡಿತ್ಯ ಹೊಂದಿದವರು.ಧರ್ಮದ ಮಾರ್ಗದಿಂದ ಸಮಾಜದಲ್ಲಿ ಬಹಳಷ್ಟು ಜನರಿಗೆ ಬದುಕುವ ರೀತಿ ನೀತಿಯನ್ನು ಕಲಿಸಿ ಕೊಟ್ಟವರು ನಮ್ಮ
ಶ್ರೀ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು
ಹಳ್ಳಿ ಹಳ್ಳಿಗಳಿಗೆ,ಉರು ಊರಿಗೆ ನಡೆದಾಡುತ್ತ ಬರೀ ಕಾಲ್ನಡಿಗೆಯಲ್ಲೇ ಓಡಾಡುತ್ತಾ ಧರ್ಮ, ಪೂಜೆ, ಆಚಾರ,ಬದುಕುವ ದಾರಿ ಯನ್ನು ಕಲಿಸಿ ಭಯವನ್ನು ದೂರ ಮಾಡಿದ ಜೀವಾತ್ಮ ಅವರು ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು.ಇದಕ್ಕೆ ಹಲವಾರು ಉದಾಹರಣೆಗಳು ನಿದರ್ಶನಗಳನ್ನು ನಾನು ಜನರ ಮಧ್ಯೆ ಪ್ರತಿನಿತ್ಯ ಕೇಳುತ್ತಿರುತ್ತೇನೆ.ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಪ್ರತಿಯೊಂದು ನಿಲುವುಗಳ ಜೊತೆಗೆ ಪ್ರತಿಬಿಂಬವಾಗಿ ಉತ್ತರೋತ್ತರ ಅಭಿವೃದ್ಧಿಯತ್ತ ಆಚಾರ ವಿಚಾರಗಳನ್ನಿಟ್ಟುಕೊಂಡು ಸತ್ಕಾರ್ಯದಿ ಸಮಾಜ ಕಟ್ಟುತಿರುವುದು ಸಿಂದಗಿಮಠ.ನಮ್ಮ ನಿಮ್ಮ ಎಲ್ಲರ ಮಠ ಸಿಂದಗಿಮಠ.
"ಜಗಕಾವರಿಸಿದ ಕತ್ತಲೆಯ ಸರಿಸಿದ ಜಗದ್ಗುರು
ಆಯುರ್ವೇದದ ಅಪಾರ ಜ್ಞಾನವಿತ್ತಾ ಶ್ರೀಗಳಿಗೆ ಅದಕೆ ಆಯುರ್ವೇದ ಮಹಾವಿದ್ಯಾಲಯವಾಯ್ತ ಅವರ ಹೆಸರಿನಲಿ ಎಂದು ನಾನೆಂದು ಕೊಳ್ಳುವೆ"ಅಲ್ಲದೆ
ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಹೆಸರಿನಲ್ಲಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸೇವೆ ನಿರ್ವಹಿಸುತ್ತಿದ್ದುದು ಕಾಣಬಹುದು.
ಅಲ್ಲದೆ ಸಿಂದಗಿ ಮಠ ಅಂದಿನಿಂದ ಇಂದಿನವರೆಗೂ ಅತ್ತ್ಯುತ್ತಮ ರೀತಿಯಲ್ಲಿ ಉತ್ತರೋತ್ತರ ಅಭಿವೃದ್ಧಿಯತ್ತ ಸಾಗಿಸುತ್ತ ಸೇವೆ ಸಲ್ಲಿಸುತ್ತಿರುವ ಕಾಯಕಯೋಗಿ ಬೇರೆ ಯಾರೂ ಅಲ್ಲ ಶ್ರೀ.ವೇ.ಶಿವಬಸವಯ್ಯ.ಆರಾಧ್ಯಮಠ ಗುರುಗಳು ಮತ್ತು ಎಲ್ಲ ಸಿಬ್ಬಂದಿ ವರ್ಗ.
ಸಾತ್ವಿಕ,ಸಜ್ಜನ ಸದ್ಭಕ್ತ ಬಳಗವನ್ನು ಕಟ್ಟಿಕೊಂಡು ಹಗಲಿರುಳು ಶ್ರಮವಹಿಸಿ ಜನರಲ್ಲಿ ಧರ್ಮ,ದೈವ ದೇವರು,ಭಕ್ತಿ,ಆಚಾರ ಅಳವಡಿಸಿಕೊಂಡು ಬದುಕುವುದರ ಬಗ್ಗೆ ಹೇಳುತ್ತ ಜೊತೆಗೆ ಮಠದ ಶ್ರೇಯೋಭಿವೃದ್ಧಿಯ ಬಯಸುತ್ತ ಜಂಗಮ ವಟುಗಳ ವೇದ ವೈದಿಕ ಶಿಕ್ಷಣ ಆಚಾರ ವಿಚಾರವೆಲ್ಲವುಗಳನ್ನು ಕಲಿಸಿ, ಸಮಾಜದ ಸತ್ಪಾತ್ರದ ಸೇವೆಯನ್ನು ಸಫಲತೆಯಿಂದ ಮುನ್ನಡೆಸಿಕೊಂಡು ಸತ್ಕಾರ್ಯವನ್ನು ನಿರಂತರವಾಗಿ ಮಾಡುತ್ತಲಿದ್ದಾರೆ.
ಅದೇ ರೀತಿ ಸಂಸ್ಕೃತ ವಿಷಯವನ್ನು ಬೋಧಿಸುತ್ತ ವಿದ್ವಾನ್. ಶ್ರೀ ಜಿ.ಎಸ್ ಭಟ್ ಗುರುಗಳು ವಿದ್ಯಾರ್ಥಿಗಳ ಮತ್ತು ಮಠದ ಶ್ರೇಯೋಭಿವೃದ್ಧಿಗೆ ಶ್ರಮವಹಿಸುತ್ತ ಬಂದಿದ್ದಾರೆ.
ಸುಮಾರು ನಲವತ್ತು- ಐವತ್ತು ವರ್ಷಗಳ ಹಿಂದೆ ಯಾವಾಗ ಸಿಂದಗಿ ಶ್ರೀ ಶಾಂತವೀರ ಶ್ರೀಗಳು ಆ ಪುಟ್ಟ ಜಂಗಮ ಬಾಲಕರಾದ ಶ್ರೀ ವೇ.ಶಿವಬಸವಯ್ಯ ಆರಾಧ್ಯಮಠ ಗುರುಗಳನ್ನು ಎಂದು ಸಿಂದಗಿಮಠಕ್ಕೆ ಕರೆತಂದು ಕಲಿಸಿ ಧರ್ಮ ಆಚಾರ ವಿಚಾರಗಳ ಧಾರೆಯೆರೆದರೋ
ಅಂದಿನಿಂದ ಈವರೆಗೂ 40 -50 ದಶಕಗಳಿಂದ ವಟುಗಳಿಗೆ ವೇದ ಅಧ್ಯಯನದ ವ್ಯವಸ್ಥೆ ಬರುವ ಭಕ್ತರ ಸೇವೆ ಮಠದ ಸಂಪೂರ್ಣ ಜವಾಬ್ದಾರಿ ಆಡಳಿತದ ಅಧಿಕಾರದ ಜೊತೆಗೆ ಸಂಸ್ಕೃತ ಪಾಠ ಮಾಡುತ್ತ ಶ್ರೀ ಗಳಿಗೆ ಪ್ರೀತಿ ಪಾತ್ರರಾಗಿ ಅವರನ್ನು ನೆರಳಿನಂತೆ ಹಿಂಬಾಲಿಸುತ್ತ ಮಠದ ಸಂಪೂರ್ಣ ಜವಾಬ್ದಾರಿ ಹಾಗೂ ಕರ್ತವ್ಯ ಪರಿಪಾಲಕರಾಗಿ
ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರು ನಮ್ಮೆಲ್ಲರ ಶ್ರೀ. ವೇ.ಶಿವಬಸವಯ್ಯ ಆರಾಧ್ಯಮಠ ಗುರುಗಳು.
ಅಂದು ಸಿಂದಗಿ ಮಠದ ಆ ಬಯಲು ಜಾಗ ಚಿಕ್ಕದಾದ ಕಟ್ಟಡ ದೊಂದಿಗೆ ಇದ್ದ ಮಠ,ಇಂದು ಬೃಹದಾಕಾರವಾದ ಕಟ್ಟಡ ಮೇಲ್ಛಾವಣಿ ಪ್ರಸಾದಗೃಹ,ವಟುಗಳಿಗೆ ಬಂದ ಭಕ್ತರಿಗೆ ಇರಲು ಪ್ರತ್ಯೇಕ ವ್ಯವಸ್ಥೆ,ಮದುವೆಯ ಕಲ್ಯಾಣಮಂಟಪ,ಪಕ್ಕದಲ್ಲೇ ಇನ್ನಿತರ ಎಲ್ಲ ಕಾರ್ಯಕ್ರಮ ನಡೆಸಬಹುದಾದ ವೇದಿಕೆಯನ್ನೊಳಗೊಂಡ ಬಯಲು ಮಂದಿರ ರೀತಿಯ ವ್ಯವಸ್ಥೆ,ಗೋಪುರ,ಶ್ರೀ ಮಠದ ಕಮಾನು,ಮಠದ ಹೆಸರಲ್ಲಿ ಒಂದು ಸರ್ಕಲ್ ಹಾಗೂ ಇನ್ನೂ ಅನೇಕ.ಇದೆಲ್ಲ ಸಾಧನೆಗೆ ಸಾಧ್ಯವೆ ಅನ್ನಿಸುತ್ತದೆ.ಇರಬೇಕಿತ್ತು ಇಂದು ಆ ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು.ಇದಕ್ಕೆ ಕಾರಣ ಕಾಯಕಯೋಗಿ ಹಗಲಿರುಳು ಶ್ರಮಿಸಿ ಸೇವೆಸಲ್ಲಿಸುತ್ತಿರುವ ಶ್ರೀ. ವೇ.ಶಿವಬಸವಯ್ಯ ಆರಾಧ್ಯಮಠ ಗುರುಗಳು ಮತ್ತು ಎಲ್ಲ ಸದ್ಭಕ್ತರ ಸಮೂಹ ವೆಂದರೆ ತಪ್ಪಾಗಲಾರದು.ಇದಕ್ಕೆ ಶ್ರೀಗಳ ಶುಭಾಶಿರ್ವಾದ ಮತ್ತು ಸದಿಚ್ಛೆಯಂದು ಗುರುಗಳು ಹೇಳುವುದು ಉಂಟು.
-----------------------
"ಬಂದ ಭಕ್ತರನು ಕಂಡು ಕೈ ಮಾಡಿ ಕರೆದು
ಆಲಿಸುತ ಅಕ್ಕರೆಯಿಂದಲಿ ಹಿತನುಡಿಯಾಡಿ
ಸುತ್ತ ಹತ್ತೂರಿನ ಜನರಿಗೆ ಹತ್ತಿರದವರಾಗಿ
ಹಸಿದವರಿಗೆ ಅನ್ನಪ್ರಸಾದದ ಸೇವೆಗೈಯುತಲಿ
ಸಿಂದಗಿಯ ಶ್ರೀಗಳಾಶಯ ಮಾತು ಕೃತಿಗೆ ತಂದು
ಸದಾ ಕಾಯಕನಿರತ ಶ್ರೀ ಶಿವಬಸವಯ್ಯನವರು
ಧರ್ಮಜ್ಯೋತಿಯಾಗಿ ದಾರಿದೀಪವಾಗಿದೆಯದು
ಕಲಿತ ಜಂಗಮ ವಟುಗಳಿಗೆ ಸಿಂದಗಿಮಠವಿಂದು
ಕಟುವಾಗಿ ಹೇಳಿ ದಿಟವಾಗಿ ಪಾಠ ಕಲಿಸಿ ಕೊಟ್ಟು
ಹಸನಾಗಿಸಿ ಬದುಕುಹೊಸತನವನೀಡಿ ವಟುವಿಗೆ
ಕಾಯಕವೆ ಕೈಲಾಸವೆಂದು ಧರ್ಮದದಾರಿ ತೋರಿ
ಬದುಕು ಬಂಗಾರವಾಗಿಸಿದೆ ಸಿಂದಗಿಯಮಠ"
--------------------------
ಹಾವೇರಿಯಲ್ಲಿ ಸಿಂದಗಿಮಠ ಎಲ್ಲರಿಗೂ ಪೂಜನೀಯ ಭಕ್ತಿಯ ಶಕ್ತಿ ಕೇಂದ್ರ.
ಮಠಕ್ಕೆ ಹೋಗಿ .ಲಿಂ.ಶ್ರೀ.ಮ.ಘ ಚ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆಗೆ ನಮಸ್ಕರಿಸಿ
ಸರ್ವರೂ ಇಷ್ಟಾರ್ಥಗಳನ್ನು ಬೇಡಿಕೊಳ್ಳುವುದು ರೂಢಿ,ಪದ್ಧತಿ,ಆಚರಣೆಯೇ ಆಗಿಹೋಗಿಬಿಟ್ಟಿದೆ.
ಅದಲ್ಲದೆ ದಿನೇ ದಿನೇ ಸಿಂದಗಿಮಠಕ್ಕೆ ಹಳ್ಳಿ ಹಳ್ಳಿಗಳಿಂದ ಭಕ್ತರು ಬರುವ ಸಂಖ್ಯೆ ಹೆಚ್ಚುತ್ತಲೇ ಇದೆ.ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವುದಲ್ಲದೇ ಧರ್ಮ ದೈವತ್ವದ ಬೆಳಕಿನೊಂದಿಗೆ ಪೂಜೆ ಹೋಮ ಹವನ ಆಚರಣೆಯ ವಿಚಾರ ವಿಮರ್ಶೆ,ಹುಟ್ಟು,ಸಾವು ನೋವು,ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಶ್ರೀ ಸಿಂದಗಿಮಠ ತನ್ನದೇ ಆದ ಪಾತ್ರ ಹಾಗೂ ವೈಶಿಷ್ಟ್ಯವನ್ನು ಹೊಂದಿದೆ.ಆಚಾರ ವಿಚಾರ,ಧರ್ಮ,ದೈವತ್ವದಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.
ಪ್ರಸ್ತುತ ಕಾಲದಲ್ಲಿ ಮನುಷ್ಯನ ಸದೃಢ ಮನೋದೈಹಿಕ ಬೆಳವಣಿಗೆಗೆ ಮಠಮಾನ್ಯಗಳ ಪಾತ್ರ ಹಿರಿದಾದುದು.
.........................................................
ಡಾ.ಸಂಗಮೇಶ್ವರ.ಎನ್.ದೊಡ್ಡಗೌಡ್ರ.
ಎಂ.ಡಿ.(ಆಯು)
ಸಹ ಪ್ರಾಧ್ಯಾಪಕರು.
ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
ಹಾವೇರಿ.ಕರ್ನಾಟಕ
Comments
Post a Comment