ಸಾಹಿತ್ಯ ಸಮ್ಮೇಳನಕೆ ಸ್ವಾಗತ
"ಸ್ವಾಗತ ಸಾಹಿತ್ಯ ಸಮ್ಮೇಳನಕೆ"
ಸ್ವಾಗತವು ಸರ್ವರಿಗೂ ಸಾಹಿತ್ಯ ಸಮ್ಮೇಳನಕೆ
ಬನ್ನಿ ಎಲ್ಲ ತಾಯಿಗೆ ಭುವನೇಶ್ವರಿಗೆ ದರ್ಶನಕೆ
ದ್ವಾರವಿದು ಹಾವೇರಿಯು ಉತ್ತರಕರ್ನಾಟಕಕೆ
ಕನ್ನಡದ ತೇರು ತಾಯಿ ಭುವನೇಶ್ವರಿಗೆ ಮೆರಗು
ಧರೆಯಲಿ ಸ್ವರ್ಗವಿದಿಂದು ಪುಣ್ಯಪ್ರದವೀ ನಾಡು
ಕರೆಯುತಲಿ ಕೈಬೀಸಿ ಸರ್ವರನು ಕನ್ನಡದ ಈ ಬೀಡಿಗೆ
ಗಿರಿ ಶಿಖರ ದೇವಗಿರಿಯು ಹಾವೇರಿಗೆ ಶಿರದಂತೆ
ಕೊರಳಲಿ ಯಾಲಕ್ಕಿಮಾಲೆ ಧರಿಸಿಹಳು ತಾಯಿ
ಭಕ್ತರ ಭಕ್ತಿಯ ಶಕ್ತಿ ಮಠವು ಸಿಂದಗಿಮಠವಿಲ್ಲಿ
ಹರಸಿ ಹಾರೈಸುತಲಿ ಸದಾ ಹುಕ್ಕೇರಿಮಠವು
ಧರ್ಮ ವರದಾ ನದಿಗಳು ಕೂಡಿ ಸಂಗಮ
ತುಂಗಭದ್ರೆ ಹರಿಯುತಲಿ ಬದುಕು ಸದಾ ಸುಗಮ
ಶರೀಫ ಕೃಷ್ಣ ಗೋಕಾಕರ ನೆಲೆಬೀಡು ಈನಾಡು
ಸಿರಿಯೇ ಸರಿ ಸರ್ವಜ್ಞರು ಪುರಸಿದ್ದೇಶ್ವರರ ಈ ಬೀಡಿಗೆ
ಬಂಕಾಪುರದ ನವಿಲುಧಾಮ ಕವಿ ರನ್ನರ ಈ ಬೀಡು
ಚಂದ ಈ ನಾಡು ಚಂಪಾ ಗೋಕಾಕರ ನೆಲೆಬೀಡು
ಕೆಚ್ಚೆದೆಯ ಮೈಲಾರ ಮಹದೇವರು ಹೆಮ್ಮೆ ನಾಡಿಗೆ
ಹರಿಕಾರ ಹಳ್ಳೀಕೇರಿಯವರು ನಮ್ಮಯ ಈ ಬೀಡಿಗೆ
ಸಂಗೂರು ಕರಿಯಪ್ಪರ ಸ್ವಾತಂತ್ರ್ಯದ ಕೊಡುಗೆ
ಹೊಸಮನಿ ಸಿದ್ದಪ್ಪರ ಮಹದಾಸೆಯ ಹಾವೇರಿ
ಖಾರ ಸವಣೂರಿನದು ಕಾಯಿ ಬ್ಯಾಡಗಿಯದು
ಪ್ರಸಿದ್ದಿ ಪಡೆದವು ಹಾವೇರಿ ಜಿಲ್ಲೆಯವು ಎಂದು
ಗರಿಯಿದು ಹಾವೇರಿಗೆ ಕನ್ನಡ ಸಮ್ಮೇಳನವಿಲ್ಲಿ
ಮೋಳಗಲಿ ಜಯಭೇರಿ ಕನ್ನಡಾಂಬೆಯ ಮಡಿಲಲಿ
Comments
Post a Comment