ರವಿ ಕಿರಣ ನಿಶ್ಚಯ

ನಲವತ್ತರ ನಂತರ ನಾ ಹೆಂಗಿರಬೇಕು..?

ನಲವತ್ತರ ನಂತರ ನಾ ಹೆಂಗಿರಬೇಕು,
ನಲವತ್ತರ ನಂತರ ನಾ ಹಿಂಗ..ಇರಬೇಕು,
ಉಪ್ಪು ಮರೆಯಬೇಕು ಸಪ್ಪು ತಿನ್ನಬೇಕು
ಅಕ್ಕರೆಯ ಸಕ್ಕರೆಯು ನಮಗೇಕೆಬೇಕು

ಮೈಬರುವ ಮೇದೋಹಾರ ದೂರವಾಗ ಬೇಕು
ತುಪ್ಪ,ಹೆಪ್ಪು,ಉಪ್ಪಿನಕಾಯಿ ಯಾಕ ಬೇಕು 
ವ್ಯಸನ ದೂರವಾಗಿ ವ್ಯಾಯಾಮ ಇರಬೇಕು
ಕಂಡಕನಸು ಈಡೆರಲುಸದಾಕಾಯಕದಿರಬೇಕು  


ನೆನಿಟ್ಟಿದ್ದುಬೇಡ ಕೆನೆ ಮೊಸರು ಬೇಡವೇ ಬೇಡ
ಸಿರಿಧಾನ್ಯವಿದ್ದರೆ ಸಾಕು ಬೇರೆಲ್ಲ ಯಾಕೆ ಬೇಕು.
ನಾ ಎನ್ನುವುದು ಬಿಡಬೇಕು ನೀಗಿದ್ದು ಮಾಡಬೇಕು 
ಶಾಂತಿ ಸಂಯಮ ಬದುಕಿಗೆ ಸತ್ವಗುಣ ಸಾಕು


ಹೊರಗಿನೂಟ ಯಾಕ ಮನೆಯೂಟವು ಸಾಕು
ತೂಕ ಸರಿಯಿದ್ದು ವಾರಕ್ಕೊಮ್ಮೆ ಉಪವಾಸ ಬೇಕು 
ನಿದ್ರೆಯು ಸರಿಯಿರಲಿ ಉಪದ್ರವವು ಯಾಕ ಬೇಕು
ಭೋಗ ಜೀವನ ಸಾಕ ಯೋಗ ಜೀವನ ಬೇಕು



ಸತಿ ಹೇಳಿದಂತೆ ಮತಿ ಮಿತಿ ಇರಬೇಕು 
ಮಕ್ಕಳಿರುವವರು ಸ್ಥಿತಿಯ ಅರಿವಿರಬೇಕು 
ಅರಿತು ಬಾಳುವ ಜೀವನ ನಿಮ್ಮದಾಗಬೇಕು
ಮರೆಯದಿರಿ ಬದುಕ ಬಂಗಾರವಿದು ಅರಿತು ಬದುಕಬೇಕು

Comments